Quantcast
Channel: Poems – Sprinting Mind
Viewing all articles
Browse latest Browse all 4

ಜಾರಿಬಿದ್ದ ನಕ್ಷತ್ರ

$
0
0
ಜಾರಿ ಬಿದ್ದ ನಕ್ಷತ್ರ ಇದು. ವಿಶ್ವ ಬ್ರಹ್ಮಾಂಡದನಂತ ತಿರುಗಣೆಯೊಳಗಿನಿಂದ ಜಾರುತುರುಳಿದೆ; ಪಥಬಿಟ್ಟು, ಪ್ರಭೆ ತೊರೆದು, ಅದಾವುದೋ ಮಾಯೆಯೊಳಗೆ ಸಿಲುಕಿ. ಸಂಖ್ಯಾಸಂಖ್ಯ ಗ್ರಹತಾರೆಗಳ ಗುಚ್ಛದಲೊಂದು ಮಿಂಚಂತೆ ಸುತೇಜದಿ ನಗುತ ತಿರುಗುತಿತ್ತು, ತನ್ನದೇ ಕಕ್ಷೆಯಲ್ಲಿದು. ಇದ್ದಕ್ಕಿದ್ದಂತೆ ಯಾವ ಗುರುತ್ವಾಕರ್ಷಣೆ ಬಲವೆಳೆಯಿತೋ ತಳವರಿಯದ ಕಂದಕದೆಡೆಗೆ. ತಪ್ಪಿದ್ದೀತೆಲ್ಲಿ ವಿಶ್ವ ನಿಯಮದಿ? ಗಂಟಲೊಡೆದುದೇಕೋ ಲೋಕದ ಸೃಸ್ಟಿರಾಗದಲ್ಲಿ? ಹೌದು; ಯಾರಿಗುಂಟಷ್ಟೊಂದೊಲುಮೆ, ಈ ವಿಶಾಲ ಬಯಲಿನಲಿ. ತನ್ನದೇ ಕಕ್ಷೆ, ತನ್ನದೇ ಪರಿಧಿ, ಎಲ್ಲರಿಗೂ. ಓಡುತಿವೆ. ತಿರುಗುತಿವೆ. ಮಿನುಗುತಿವೆಯಲ್ಲ ಬಿದ್ದ ನಕ್ಷತ್ರದರಿವಿರದೆ. – ಎಂಶ್ರೀ  17-Mar-1992 (remembering a great…Read more ಜಾರಿಬಿದ್ದ ನಕ್ಷತ್ರ

Viewing all articles
Browse latest Browse all 4

Latest Images

Trending Articles





Latest Images